ಹೊಸ ಆನ್‌ಲೈನ್ ಅರ್ಜಿ ಸ್ವೀಕೃತಿ ಮಾತ್ರ ಸಕ್ರಿಯಗೊಳಿಸಲಾಗಿದೆ
ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ
"ಒಂದು ರಾಷ್ಟ್ರ - ಒಂದು ಪಡಿತರ ಚೀಟಿ" ಯೋಜನೆ ಸದುಪಯೋಗಿಸಿರಿ

ಪಡಿತರ ಚೀಟಿ
ಹೊಸ ಪಡಿತರ ಚೀಟಿಗಾಗಿ ಹಾಗು ಪಡಿತರ ಚೀಟಿಯಲ್ಲಿನ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆಧಾರ್ ಆಧಾರಿತ ಪಡಿತರ ಕೂಪನ್
ಪಡಿತರ ಕೂಪನ್‌ಗಳನ್ನು ಆಧಾರ್ ನೋಂದಿಗೆ ನೋಂದಾಯಿಸಲಾಗದ ಮೊಬೈಲ್ ಮೂಲಕವೂ ಪಡಿತರ ಚೀಟಿದಾರರು ನೇರವಾಗಿ ಪಡೆಯಬಹುದು.

ಎಸ್.ಯಂ.ಎಸ್ ಅಲರ್ಟ್
ನಿಮ್ಮ ಮೊಬೈಲ್ ಸಂಖ್ಯೆಯನ್ನು ಇಲಾಖೆಯೊಂದಿಗೆ ನೋಂದಾಯಿಸಿಕೊಂಡಿದ್ದಲ್ಲಿ, ನಿಮ್ಮ ಹಕ್ಕಿನ ಪಡಿತರ ಹಂಚಿಕೆ ಮಾಹಿತಿಯನ್ನು ಪ್ರತಿ ಮಾಹೆ ತಪ್ಪದೆ ತಮ್ಮ ದೂರವಾಣಿಗೆ ಎಸ್.ಯಂ.ಎಸ್ ಮುಖಾಂತರ ಪಡೆಯಬಹುದು.

ಯಾವುದೇ ನ್ಯಾಯಬೆಲೆ ಅಂಗಡಿಯಲ್ಲೂ ನಿಮ್ಮ ಪಡಿತರ
ಪಾಸ್ ವ್ಯವಸ್ಥೆ ಮೂಲಕ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ಮಾಹೆಯ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಬಹುಮಾನ ಯೋಜನೆ
ಸಾರ್ವಜನಿಕರು ಕಾಳಸಂತೆಯಲ್ಲಿ ಮಾರ್ಗಾಂತರಗೊಳ್ಳುವ ಆಹಾರಧಾನ್ಯದ ಬಗ್ಗೆ ಖಚಿತ ಮಾಹಿತಿಯನ್ನು ಇಲಾಖೆಯ ವೆಬ್ಸೈಟ್ ಮುಖಾಂತರ ನೀಡಿ ಬಹುಮಾನ ಪಡೆಯಬಹುದು.

ಸಾರ್ವಜನಿಕ ದೂರು
ಸಾರ್ವಜನಿಕರು ಪಡಿತರ ವಿತರಣೆ ಹಾಗೂ ಪಡಿತರ ಚೀಟಿ ಸಮಸ್ಯೆಗಳಿಗೆ ನೇರವಾಗಿ ದೂರು ಸಲ್ಲಿಸಲು ಆನಲೈನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪಾರದರ್ಶಕ ವ್ಯವಸ್ಥೆ
ಪಡಿತರ ಚೀಟಿ, ಪಡಿತರ ಹಂಚಿಕೆ ಹಾಗು ವಿತರಣೆ ಕುರಿತಂತೆ ಮಾಹಿತಿಯನ್ನು ಇಲಾಖೆಯ ವೆಬಸೈಟ್ ಸಂಪೂರ್ಣ ಪಾರದರ್ಶಕವಾಗಿ ಲಭ್ಯವಿದೆ.